ಒಯ್ಯಾರದ ಉಯ್ಯಾಲೆಯಲಿ ಜೀಕುತ್ತ
ನೆನಪುಗಳು ಒನಪಿನಲಿ ಉಕ್ಕುವವು
ಸುಮ್ಮನಿರುವಾಗ ಸುಳಿವ ನೀಡದೇ
ಸುಳಿದಾಡುವವು ಸುತ್ತೆಲ್ಲ......
ಹಬ್ಬಿರುವ ಮಬ್ಬನ್ನೆ ತಬ್ಬಿ
ಹಬ್ಬವಾಚರಿಸಿದ ನೆನಪು
ದಿಬ್ಬವೇರಿ ನಿನ್ನ ತಬ್ಬಿ ತಬ್ಬಿಬ್ಬಾದಾಗ
ಮೂಡಿದ ಕಬ್ಬದ ನೆನಪು
ಮನದ ಕದದ ಬಳಿಯೆ ಕಾದು
ಕೆದಕುತಿದ್ದ ಒಂದೊಂದೇ ನೆನಪು
ಧುಮ್ಮಿಕ್ಕಿ ಧಮನಿಯಲಿ ಹರಿಯುತ್ತ
ನಿನ್ನೆದೆಯ ದನಿಯಾದ ನೆನಪು
ನಿನ್ನೊಲುಮೆ ಝರಿಯಾಗಿ ನನ್ನೊಡಲ
ಸೇರಿ, ನನ್ನಲೊಂದಾದ ನೆನಪು
ಹೊನ್ನ ಹಾರವ ಹಿಡಿದು ಕನ್ನಡಿಯ
ಎದುರು ನಿನ್ನ ಪ್ರತಿಬಿಂಬದ ನೆನಪು
ಮೆಚ್ಚುತ್ತ, ಬೆಚ್ಚುತ್ತ, ಕೆಚ್ಚಿನಲಿ ಮುನ್ನುಗ್ಗಿ
ಮುಚ್ಚುವ ಮುನ್ನ ಬಿಚ್ಚಿಟ್ಟ ನೆನಪು
ಹಚ್ಚಿರುವ ದೀಪದ ಪಡಿಯಚ್ಚಲಿ
ಹೊಚ್ಚ ಹೊಸದೊಂದು ನೆನಪು
ಅಲೆ ಅಲೆಯಾಗಿ ಸುತ್ತೆಲ್ಲ ಸುಳಿದಾಡಿ
ಬಲೆಯಿಂದ ಇಳೆಗಿಳಿದ ನೆನಪು
ನೋವಲಿ ಬೇವ ವೇಳೆಗೆ ಬಂದು
ಭಾವ ಸೆಲೆಯಾದ ಓಲೆಯ ನೆನಪು
ಹೊಂಚು ಹಾಕುತಲಿರುವ ಮಿಂಚಂತೆ
ಮುಂಚಿಂದಲೂ ಇಂಚಿಂಚೂ ನಿನ್ನದೇ ನೆನಪು
ಸಂಚಿನಲಿ ಕುಂಚ ಹಿಡಿದು, ಬಾಳ
ಅಂಚಲಿ ಕೂತು ಚಿತ್ರ ಬಿಡಿಸಿದ ನೆನಪು
ಹೊಯ್ದಾಟದಲೇ ಜೀವನವು ಸಾಗಿರಲು
ತುಯ್ದಾಡತೊಡಗಿತ್ತು ಒಯ್ದೆಡೆಯಲ್ಲೆಲ್ಲ
ಮುಳುಗದಿದ್ದರೂ ಮುಳುವಾಗಿಯೇ
ಮುನ್ನುಗ್ಗುತ್ತಿದೆ ಬಾಳ ನೆನಪು
ಪ್ರೀತಿಯಿಂದ,
ಶಶಿ ಚೆಂಬರ್ಪು
ondu stanza baaki aayidu:
ReplyDeleteswitch haakidastoo baari
current hoda nenapu
bed room switch hakidaaga
aDige maneyalli beLaku banda nenapu
nice one
ReplyDeletegood one..
ReplyDeletenimma kannada shabdha bhandara chennagide...
keep it up...
chennagide.. bhavanegalu
ReplyDeletenice so nice:):)
ReplyDelete
ReplyDeleteLatest Entertainment, Love Gossip and Bollywood News